ಆರ್ಚರ್ ಫಿಶ್ ( ) ಎಂದು ಕರೆಯಲ್ಪಡುವ ಇದು ಮೀನಿನ ಒಂದು ಪ್ರಭೇದ. ತಮ್ಮ ವಿಶೇಷವಾದ ಬಾಯಿಯ ಮೂಲಕ ನೀರನ್ನು ಚಿಮ್ಮಿ ಕೀಟಗಳನ್ನು ಹೊಡೆದುರುಳಿಸುವ ಕಾರಣದಿಂದ ಇದಕ್ಕೆ ಈ ಹೆಸರು ಬಂದಿದೆ. ಇವು ಉಪ್ಪುನೀರು ಮತ್ತು ಸಿಹಿನೀರು ಸೇರುವಂತಹ ಜಾಗಗಳಲ್ಲಿ ಇರುತ್ತವೆ. ಸಾಮಾನ್ಯವಾಗಿ ನದಿಯ ನೀರು ಸಮುದ್ರದ ಅಲೆಗಳನ್ನು ಸೇರುವ ಜಾಗ ಹಾಗೂ ಮ್ಯಾಂಗ್ರೋವ್ ಗಳಲ್ಲಿ ವಾಸಿಸುತ್ತವೆ. ಇದಲ್ಲದೇ ಸಮುದ್ರದಲ್ಲಿ ಹಾಗೂ ಸಮುದ್ರದಿಂದ ದೂರವಿರುವ ಸಿಹಿನೀರಿನಲ್ಲೂ ಕಾಣಸಿಗುತ್ತವೆ. ಭಾರತ ಶ್ರೀಲಂಕಾದಿಂದ ಹಿಡಿದು ಉತ್ತರಆಸ್ಟೇಲಿಯಾ, ಮೆಲನೇಶಿಯ ತನಕದ ಪೂರ್ಣ ಆಗ್ನೇಯ ಏಶಿಯಾದಲ್ಲಿ ಇವೆ. == ಉಲ್ಲೇಖಗಳು == == ಹೊರಸಂಪರ್ಕಕೊಂಡಿಗಳು == ,